ಅಭಿಪ್ರಾಯ / ಸಲಹೆಗಳು

ಫ್ಲ್ಯಾಟ್‌ಗಳು ಮತ್ತು ಅಪಾರ್ಟ್‌ಮೆಂಟ್‌ಗಳಿಗೆ ಸಂಬಂಧಿಸಿದ ಸಲಕರಣೆಗಳ ನೋಂದಣಿ

 

ಪ್ರ.1

ಅಪಾರ್ಟ್ ಮೆಂಟ್ ಕಾಯಿದೆ ಯಾವುದಕ್ಕೆ ಅನ್ವಯವಾಗುತ್ತದೆ? 

ಉತ್ತರ:

ಅಪಾರ್ಟ್ ಮೆಂಟ್ ಗಳ ಮಾಲೀಕ ಅಥವಾ ಎಲ್ಲಾ ಮಾಲೀಕರು ಈ ಕಾಯಿದೆಯನ್ವಯ ಡಿಕ್ಲರೇಷನ್ ಗೆ ರುಜು ಮಾಡಿ ನೋಂದಾಯಿಸಿದವುಗಳ ಮಾತ್ರ ಅನ್ವಯವಾಗುತ್ತವೆ. ಪರಂತು ವಾಸಕ್ಕೆ ಉಪಯೋಗಿಸುವ ಅಪಾರ್ಟ್ ಮೆಂಟ್ ಗಳನ್ನು ಮಾತ್ರ ಈ ಕಾಯಿದೆ ಕೆಳಗೆ ತರಬಹುದು. 

ಪ್ರ.2

ಅಪಾರ್ಟ್ ಮೆಂಟ್ ಎಂದರೇನು? 

ಉತ್ತರ:

ಅಪಾರ್ಟ್ ಮೆಂಟ್ ಎಂದರೆ ಒಂದು ಅಥವಾ ಹೆಚ್ಚು ಅಪಾರ್ಟ್ ಕೊಠಡಿಗಳುಳ್ಳ ಒಂದು ಅಥವಾ ಹೆಚ್ಚು ಅಂತಸ್ತುಗಳಲ್ಲಿ ರೂಮು ಇರುವ ಕಟ್ಟಡಗಳ ಭಾಗವಾಗಿದ್ದು, ರೂಮು ಸ್ವತಂತ್ರವಾಗಿ ವಾಸಕ್ಕೆ ಉಪಯೋಗಿಸುವಂತಹ ಮತ್ತು ಸಾರ್ವಜನಿ ರಸ್ತೆ ಅಥವಾ ಸಾಮಾನ್ಯ ಉಪಯೋಗದ ಜಾಗಕ್ಕೆ ದಾರಿ ಉಳ್ಳಂತಹ ಕಟ್ಟಡವಾಗಿರುತ್ತದೆ. 

ಪ್ರ.3

ಕಟ್ಟಡ ಎಂದರೇನು? 

ಉತ್ತರ: 

ಕಟ್ಟಡ ಎಂದರೆ ನಾಲ್ಕುಅಥವಾ ಅದಕ್ಕಿಂತ ಹೆಚ್ಚು ಅಪಾರ್ಟ್ ಮೆಂಟ್ ಹೊಂದಿರುವ ಕಟ್ಟಡವಾಗಿರುತ್ತದೆ. 

ಪ್ರ.4

ಅಪಾರ್ಟ್ ಮೆಂಟ್ ಕಾನೂನಿನಂತೆ ಮಾಲೀಕತ್ವ ಪಡೆಯುವುದು ಹೇಗೆ? 

ಉತ್ತರ:

ಈ ಕಾನೂನಿನ್ವಯ ಡಿಕ್ಲರೇಷನನ್ನು ಕಡ್ಡಾಯವಾಗಿ ನೋಂದಣ ಮಾಡಿಸಿ, ನಂತರ ಇದಕ್ಕೆ ಸಂಬಂಧಿಸಿದಂತೆ ನಿಗಧಿತ  ನಮೂನೆಯಲ್ಲಿ ಡೀಡ್ ಆಫ್ ಅಪಾರ್ಟ್ ಮೆಂಟ್ ಮಾಡಿಕೊಳ್ಳಬೇಕು. ಇವುಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕಾಗುತ್ತದೆ. (ವಿವರಗಳಿಗೆ  Karnataka Apartment Ownership Act 1972 ನಿಯಮಾವಳಿ 1974 ನೋಡಿ)

ಪ್ರ.5

ಫ್ಲಾಟ್ (Feet) ಎಂದರೇನು?

ಉತ್ತರ: 

ಫ್ಲಾಟ್ ಎಂದರೆ ಪ್ರತ್ಯೇಕವಾದ ಸ್ವತಂತ್ರ ವ್ಯವಸ್ಥಯುಳ್ಳ ವಾಸ ಕಛೇರಿ, ಪ್ರದರ್ಶನ ಮಳಿಗೆ, ಅಂಗಡಿ, ಗೋಡೌನ್, ಗ್ಯಾರೇಜ್ ಗಳಿಗೆ ಉಪಯೋಗಿಸಬಹುದಾದ ಸ್ಥಳ. 

ಪ್ರ.6 

ಫ್ಲಾಟ್ ಖರೀದಿಸುವ ಕರಾರುಗಳೇನು? 

ಉತ್ತರ:  

ಫ್ಲಾಟ್ ಗಳನ್ನು ಕಟ್ಟುವ, ಅಭಿವೃದ್ದಿಪಡಿಸುವ ವ್ಯಕ್ತಿಯು ಅದಕ್ಕಾಗಿ ಖರೀದಿದಾರರಿಂದ ಮುಂಗಡ ಹಣ, ಠೇವಣಿ  ಪಡೆಯುವ ಮೊದಲು ಕರಾರು ಪತ್ರವನ್ನು ಕಡ್ಡಾಯವಾಗಿ ನೋಂದಾಯಿಸಬೇಕಾಗಿರುತ್ತದೆ. ಸದರಿ ಮುಂಗಡ ಹಣ, ಠೇವಣಿ ಮಾರಾಟ ಒಪ್ಪಂದದ ಮೌಲ್ಯಸ ಶೇ.20ಕ್ಕಿಂತ ಹೆಚ್ಚಿಗೆ ಇರಬಾರದು.

ಪ್ರ.7 

ಫ್ಲಾಟ್ ಮಾಲೀಕತ್ವ ಹೇಗೆ ಬರುತ್ತದೆ? 

ಉತ್ತರ:

ಫ್ಲಾಟ್ ಅಭಿವೃದ್ದಿಪಡಿಸುವವನು ಕರಾರು ಪ್ರಕಾರ ಮಾಡಿಕೊಂಡು ಅವಧಿಯೊಳಗೆ ಫ್ಲಾಟ್ ಪಡೆಯುವವರ  ನೋಂದಾಯಿತ ಸಂಸ್ಥೆ, ಸಹಕಾರ ಸಂಘ, ಕಂಪನಿಗೆ ಹಸ್ತಾಂತರಿಸತಕ್ಕದ್ದು, ಈ ಮೊದಲು ಅಭಿವೃದ್ದಿಪಡಿಸುವವನು ನಿಗಧಿತ ಅವಧಿಯೊಳಗೆ ಅಂತಹ ಸಂಘ ಅಥವಾ ಕಂಪನಿ ರಚಿಸಲು ಕ್ರಮ ಕೈಗೊಳ್ಳತಕ್ಕದ್ದು.

 

ಅಪಾರ್ಟ್ ಮೆಂಟ್ ಅಥವಾ ಪ್ಲ್ಯಾಟ್ ಗಳ ನೋಂದಣೀಗೆ ಸದರಿ ಕಾಯಿದೆಗಳಲ್ಲಿ ನಮೂನೆಗಳನ್ನು ಕೊಡಲಾಗಿದೆ. ಅವುಗಳನ್ನು ನಿಗಧಿತ ಮುದ್ರಾಂಕ ಶುಲ್ಕ ಪಾವತಿ ಮಾಡಿ ನೋಂದಾಯಿಸಬೇಕಾಗುತ್ತದೆ. (ವಿವರಗಳಿಗೆ Karnataka Owernership, Regulation of promotion of Construction, sale Management and Transfer Act, 1972 ಮತ್ತು ನಿಯಮಗಳು, 1974 ನೋಡಿ.

ಮೇಲ್ಕಂಡ ಕಾಯಿದೆ ಕೆಳಗೆದ ನೋಂದಣಿ ಕಡ್ಡಾಯವಾಗಿದೆ. ನೋಂದಣ ಮಾಡಿಸದೆ ಶಾಸನಬದ್ದ ಮಾಲೀಕತ್ವ ಹೊಂದಲು ಸಾಧ್ಯವಿಲ್ಲ. 

ಪ್ರ.8  

ಗೃಹ ನಿರ್ಮಾಣ ಸಹಕಾರಿ ಸಂಘಗಳು ಹಸ್ತಾಂತರ ಮಾಡುವ ಅಥವಾ ಪಡೆಯುವ ದಸ್ತಾವೇಜುಗಳಿಗೆ ನೋಂದಣಿ ಅವಶ್ಯವಿದೆಯೇ?

ಉತ್ತರ:

ಸಹಕಾರಿ ಸಂಘಗಳ ಕಾಯಿದೆಗೆ ದಿನಾಂಕ: 01-04-2001 ರಿಂದ ಜಾರಿಗೆ ಬರುವಂತೆ ಕರ್ನಾಟಕ ಸಹಕಾರ ಸಂಘಗಳ  ಕಾಯಿದೆ 1959ರ ಕಲಂ 38ಕ್ಕೆ ತಿದ್ದುಪಡಿ ಮಾಡಲಾಗಿದೆ. ತಿದ್ದುಪಡಿ ಪ್ರಕಾರ ಗೃಹ ನಿರ್ಮಾಣ ಸಹಕಾರ ಸಂಘಗಳ  ತಾವು ಬರೆದುಕೊಡುವ ಅಥವಾ ಬರೆಸಿಕೊಳ್ಳುವ ಸ್ಥಿರಾಸ್ತಿಗಳಿಇಗೆ ಸಂಬಂಧಿಸಿದಸ ದಸ್ತಾವೇಜುಗಳನ್ನು ಕಡ್ಡಾಯವಾಗಿ ನೋಂದಾಯಿಸಬೇಕಾಗುತ್ತದೆ. (Act No.6 of 2001). ಈ ತಿದ್ದುಪಡಿಯು ಗೃಹ ನಿರ್ಮಾಣ ಸಹಕಾರ ಸಂಘಗಳು ನಿರ್ಮಿಸಿದ ಅಪಾರ್ಟ್ ಮೆಂಟ್ ಫ್ಲ್ಯಾಟ್ ಗಳಿಗೂ ಅನ್ವಯವಾಗುತ್ತದೆ

ಪ್ರ.9

ಫ್ಲ್ಯಾಟ್/ ಅಪಾರ್ಟ್ ಮೆಂಟ್ ಖರೀದಿ ವ್ಯವಹಾರದಲ್ಲಿ ಹಕ್ಕುಗಳ ವರ್ಗಾವಣೆ ಯಾವ ರೀತಿ ಆಗುತ್ತದೆ?

ಉತ್ತರ:

ಫ್ಲ್ಯಾಟ್/ಅಪಾರ್ಟ್ ಮೆಂಟ್ ಖರೀದಿ ವ್ಯವಹಾರವು ಇತರೆ ಖರೀದಿ ವ್ಯವಹಾರಗಳಂತೆ ಅತೀ ಸರಳ ವ್ಯವಹಾರವಾಗಿದೆ. ಪ್ರತಿಯೊಬ್ಬ ಖರೀದಿದಾರರು ತಮ್ಮ ಹಕ್ಕನ್ನು ಪ್ರತಿಪಾದಿಸಿ ಖರೀದಿ ಪತ್ರವನ್ನು ಸಬ್-ರಿಜಿಸ್ಟ್ರಾರ್ ಕಛೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು.

 

ಫ್ಲ್ಯಾಟ್/ಅಪಾರ್ಟೆ ಮೆಂಟ್ ಖರೀದಿ ವ್ಯವಹಾರದಲ್ಲಿ ಆಸ್ತಿಯ ಹಕ್ಕಗಳ ವರ್ಗಾವಣೆ ಇತರೆ ಆಸ್ತಿ ಖರೀದಿ ಅಂದರೆ ನಿವೇಶನ, ಮನೆ ವ್ಯವಹಾರದಂತೆ ಇರದೆ ಸ್ವಲ್ಪ ವ್ಯತ್ಯಾಸವಿರುವುದನ್ನು ಖರೀದಿದಾರರು ಈ ಕೆಳಗಿನ ಅಂಶಗಳಿಂದ ತಿಳಿಯಬಹುದು.

 

ಫ್ಲ್ಯಾಟ್/ಅಪಾರ್ಟ್ ಮೆಂಟ್ ಮಾಲೀಕತ್ವ.

(ಅ) ಭೂಮಿಯಲ್ಲಿ ಅವಿಭಾಜ್ಯದ ಹಕ್ಕು.

(ಆ) ಫ್ಲ್ಯಾಟ್/ಅಪಾರ್ಟ್ ಮೆಂಟ್ ಕಾರ್ಪೆಟ್ ಏರಿಯಾ (ಕಟ್ಟಡ) ಮತ್ತು.

(ಇ) ಬಹುತ್ವದಲ್ಲಿ ಉಪಯೋಗಿಸುವ ಹಕ್ಕು (Proportionate share in common area)

ಈ ಮೂರು ಹಕ್ಕಗಳನ್ನು ಒಟ್ಟಿಗೆ ಮಾರಾಟ ಮಾಡಿ ಖರೀದಿ ಪತ್ರದಲ್ಲಿ ವಿವರಿಸಿ ಸಬ್-ರಿಜಿಸ್ಟ್ರಾರ್ ಕಛೇರಿಯಲ್ಲಿ ನೋಂದಾಯಿಸಿದಲ್ಲಿ ಖರೀದಿದಾರನು ಫ್ಲ್ಯಾಟ್/ಅಪಾರ್ಟ್ ಮೆಂಟ್ ಗಳಿಗೆ ಸಂಪೂರ್ಣ ಮಾಲೀಕನಾಗುತ್ತಾನೆ.

 

ಮಾರಾಟಗಾರರಿಂದ ಈ ಮೂರು ಅಂಶಗಳ ಹಕ್ಕುಗಳನ್ನು ವಿವರಸುವ ಖರೀದಿ ಪತ್ರ ಪಡೆಯಬೇಕು.

ಪ್ರ.10

ಫ್ಲ್ಯಾಟ್ /ಅಪಾರ್ಟ್ ಮೆಂಟ್ ಖರೀದಿ ವ್ಯವಹಾರದಲ್ಲಿ ಭೂಮಿಯಲ್ಲಿ ಕೇವಲ ಅವಿಭಾಜ್ಯ ಅಂಗದ ಹಕ್ಕನ್ನು ಖರೀದಿಸಿದರೆ ಮಾಲೀಕರಾಗುವುದಿಲ್ಲವೆ?

ಉತ್ತರ:

ಫ್ಲ್ಯಾಟ್/ಅಪಾರ್ಟ್ ಮೆಂಟ್ ಖರೀದಿ ವ್ಯವಹಾರದಲ್ಲಿ ಭೂಮಿಯಲ್ಲಿ ಕೇವಲ ಅವಿಭಾಜ್ಯ ಅಂಗದ ಹಕ್ಕನ್ನು ಮಾತ್ರ ಮಾರಾಟ ಮಾಡಲಾಗಿದೆಯೆಂದು ವಿವರಿಸುವ ಪತ್ರ ನೋಂದಾಯಿಸಿಕೊಂಡರೆ ಫ್ಲ್ಯಾಟ್/ಅಪಾರ್ಟ್ ಮೆಂಟ್ ಬಗ್ಗೆ ಪೂರ್ಣ ಮಾಲೀಕತ್ವ ಉಂಟಾಗುವುದಿಲ್ಲ.

ಪ್ರ.11

ಫ್ಲ್ಯಾಟ್/ಅಪರ್ಟ್ ಮೆಂಟ್ ಖರೀದಿಸುವಾಗ ಗಮನಿಸಬೇಕಾದ ಮುಖ್ಯಾಂಶಗಳು ಯಾವುವು?

ಉತ್ತರ:

ಫ್ಲ್ಯಾಟ್/ಅಪಾರ್ಟ್ ಮೆಂಟ್ ಖರೀದಿಸುವಾಗ ಈ ಕೆಳಗೆ ವಿವರಿಸಿದ ವಿಷಯವನ್ನು ಪರಿಶೀಲಿಸಿ ಎಲ್ಲವೂ ಸರಿಯಾಗಿದಯೇ ಎಂಬುದನ್ನು ಖಚಿಪಡಿಸಿಕೊಳ್ಳತಕ್ಕದ್ದು.

(i) ಪ್ರಮೋಟರ್ಸ್ ರವರೊಂದಿಗೆ ಮಾರಾಟ ಮಾಡಲು ಮಾಡಿಕೊಂಡು ಒಪ್ಪಂದ ಪತ್ರವನ್ನು ಕಡ್ಡಾಯವಾಗಿ ಸಬ್-ರಿಜಿಸ್ಟ್ರಾರ್ ಕಛೇರಿಯಲ್ಲಿ ನೋಂದಾಯಿಸಿಕೊಳ್ಳತಕ್ಕದ್ದು. ತದನಂತರ ಖರೀದಿ ಪತ್ರವನ್ನು ಸಹ ನೋಂದಾಯಿಸಿಕೊಳ್ಳತಕ್ಕದ್ದು.

(ii) ಫ್ಲ್ಯಾಟ್/ ಅಪಾರ್ಟ್ ಮೆಂಟ್ ಕಟ್ಟಲು ನಗರಾಭಿವೃದ್ಧಿ ಪ್ರಧಿಕಾರ/ಮಹಾನಗರ ಸಭೆ ಪುರಸಭೆ/ಪಂಚಾಯತ್ ಸಂಸ್ಥೆಯಿಂದ ನಕ್ಷೆಯ ಮಂಜೂರಾತಿ ಪಡೆದಿರಬೇಕು.

(iii) ಮಾರಾಟಗಾರರು/ಪ್ರಮೋಟರ್ಸ್ ರವರಿಗೆ ಆಸ್ತಿಯನ್ನು ಮಾರಾಟ ಮಾಡಲು ಹಕ್ಕು ಇದೆಯೇ ಎಂಬ ಬಗ್ಗೆ ತಿಳಿಯುವುದು.

(iv) ಜನರಲ್ ಪವರ್ ಆಫ್ ಅಟಾರ್ನಿ ಆಧಾರದ ಮೇಲೆ ಖರೀದಿ ವ್ಯವಹಾರ ನಡೆಯುವಂತಿದ್ದರೆ ಈ ಜನರಲ್ ಪವರ್ ಆಫ್ ಅಟಾರ್ನಿಯು ಜಾರಿಯಲ್ಲಿದೆಯೇ ಎಂಬುದನ್ನು ತಿಳಿಯುವುದು.

(v) ಮಂಜೂರಾದ ನಕ್ಷೆಯನ್ನು ಉಲ್ಲಂಘಿಸಿ ಕಟ್ಟಿರುವ ಫ್ಲ್ಯಾಟ್/ಅಪಾರ್ಟ್ ಮೆಂಟ್ ಗಳನ್ನು ಖರೀದಿಸಬಾರದು.

(vi) ಸ್ಥಳೀಯ ಸಂಸ್ಥೆಯಿಂದ ಸ್ವಾಧೀನದ ಪ್ರಮಾಣ ಪತ್ರವನ್ನು (Occupancy Certificate) ಪಡೆಯಲಾಗಿದೇ ಎಂದು ತಿಳಿಯುವುದು.

(vii) ಕಟ್ಟಡ ನಿರ್ವಹಣೆಗೆ ಡಿಕ್ಲರೇಷನ್ ಡೀಡ್ (Declration Deed) ಹಾಗೂ ಸಹಕಾರ ಸಂಘ ಅಥವಾ ಕಂಪನಿಯನ್ನು ನೋಂದಾಯಿಸಲಾಗಿದೇ ಎಂಬುದನ್ನು ತಿಳಿಯುವುದು.

ಪ್ರ.12

ಫ್ಲ್ಯಾಟ್/ಅಪಾರ್ಟ್ ಮೆಂಟ್ ಗಳ ಒಡೆತನ ಹೊಂದಿದ ಗೃಹ ನಿರ್ಮಾಣ ಸಹಕಾರ ಸಂಘಗಳು ನೋಂದಣಿ ಮಾಡಿಸದೇ ಕೇವಲ ಷೇರ್ ವರ್ಗಾವಣೆ ಮೂಲಕ ಹಸ್ತಾಂತರ ಮಾಡುವುದು ಸರಿಯೇ?

ಉತ್ತರ:

ಕಾನೂನು ಬದ್ದವಲ್ಲ. ಇಂತಹ ಗೃಹ ನಿರ್ಮಾಣ ಸಹಕಾರ ಸಂಘಗಳು ತನ್ನ ಸದಸ್ಯರಿಗೆ ಹಂಚಿಕೆ ಅಥವಾ ಮಾರಾಟ ಮಾಡಿದ ಫ್ಲ್ಯಾಟ್/ಅಪಾರ್ಟ್ ಮೆಂಟ್ ಗಳ ಖರೀದಿ ಪತ್ರವನ್ನು ನೋಂದಣಿ ಕಾಯಿದೆ 1908ರಂತೆ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ಕಡ್ಡಾಯವಾಗಿ ನೋಂದಾಯಿಸಬಾಕಾಗುತ್ತದೆ.

 

ಇತ್ತೀಚಿನ ನವೀಕರಣ​ : 30-01-2021 05:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ನೋಂದಣಿ ಮತ್ತು ಮುದ್ರಾಂಕ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080